Tuesday, April 8, 2008

ಗುರು ದಿ ಗ್ರೇಟ್ ................!


ಪ್ರತಿ ವಸಂತಕೆ ಚಿಗುರೊಡೆದು
ಸವಿಯುಣಿಸುವ ಮಾವಿನ
ಜೀವಕಳೆ ಒಂದೆರಡು
ಮಾಸಕೆ ಮಾಸಬಹುದು
ಪ್ರತಿ ಹನಿ ಹನಿ ಸುರಿದು
ಭೋರ್ಗರೆಯುವ ನದಿಗಳಿಗೆ
ಬೇಸಿಗೆಯ ಬರದ
ಛಾಯೆ ಮೂಡಬಹುದು
ಇರುಳಿಗೆ ಭಾನು ಸರಿಯಬಹುದು,
ಬೆಳಕಿಗೆ ಶಶಿ ಮಂಕಾಗಬಹುದು
ಇಳೆಗೆ ಮಳೆಯಿರದಿರಬಹುದು
ಶರಧಿಯಲಿ ಅಲೆಗಳೆಳದಿರಬಹುದು
ಆದರೆ..........!
ಪ್ರಿಯ ಗೆಳೆಯನ ಜನ್ಮದಿನವೇ ವಸಂತ
ನವ ನೂತನ,
ನಿನ್ನ ಕೀರ್ತಿ ಶಿಖರದ

ಮೆಟ್ಟಿಲುಗಳಿಗೆ ನಿತ್ಯ ನೂತನ ರಂಗು

ಸಾಧಕನ ಹರುಷದ ಜನ್ಮದಿನಕೆ

ಗೆಳೆಯರ ಶುಭಾಶಯದ ಗುಂಗು

ಕಳೆದ ದಿನಗಳು ನಿನ್ನವೇ

ಕಾದಿರುವ ದಿನಗಳು ನಿನ್ನವೇ

ನೊಂದ ಮನಗಳನು ಸಂತೈಸುತಾ

ಸಾಧಿಸುತಿರು

ಯಶಸ್ಸಿನ ಯಾನ ಸಾಧನೆಗೆ ಸನ್ಮಾನ

ನಿನ್ನದಾಗಲಿ...........!


ನಿನ್ನ ಪ್ರೀತಿಯ ಗೆಳೆಯ

------- ರಾ. ಶಿ.





ನಿಲ್ಲದಿರು........!


ಹೊರಟೆನೆಂದೇಳಿ
ತಿರುಗಿ ನೋಡಿದೆಯಾಕೆ ಮತ್ಯೆ?
ಅಂಜಿ ಹೆದರಿದೆಯಾ ಗೆಳತಿ
ನಿನ್ನ ಮನಸೊಳಗಿನ ಸಾಕ್ಷಿಗೆ
ಮರೆತು ಬಿಡು, ಮರೆಯಾಗು
ಆದರೆ!
ನಾನ್ಯೇಗೆ ಮರೆಯಲಿ ನಿನ್ನ
ಮತ್ತೆಬರದ ಆ ದಿನಗಳನ್ನ
ಮಾಸಿ ಮರೆಯಾಗದ
ಆ ನೆನಪುಗಳನ್ನ!
ದೂರವಿದ್ದು ನಿನ್ನ ದೂರಲಾರೆ
ನೊಂದರು ನಲಿಯುವೆ ನಿನ್ನೆದುರಲಿ
ವಿಶ್ವಾಸ ನಿನಗಿರದಿದ್ದರೇನು
ನನ್ನ ಶ್ವಾಸದ ಉಸಿರು ನೀನೆ
ನನ್ನ ನಿದುರೆಯಾ ಕನಸೂ ನೀನೆ

ಕೊರಗಬೇಡ ನಿನ್ನದಲ್ಲದ ತಪ್ಪಿಗೆ
ಇರಲಿಲ್ಲ ಆ ಭಗವಂತನಿಗೂ ಒಪ್ಪಿಗೆ
ಕುಂತು-ನಿಂತು ಕಾಯುವೆ
ಬರಬಹುದೇನೋ ಸಾವು
ಹಾಗೆಯೇ ಮತ್ತೊಂದು ಜನ್ಮ
ಆಗಬಹುದೇನೋ ನಮ್ಮ ಮಿಲನ
ಕಾದು ಬರೆಯುತಿರುವೆ
ಸಾಲು ಸಾಲು ಕವನ

- ರಾ.ಶಿ.